news & Upcoming events

ಕೆಎಎಸ್ ಮತ್ತು ಪಿಎಸ್ ಐ ತರಬೇತಿಗೆ ಅರ್ಜಿ ಆಹ್ವಾನ

ಜುಲೈ 25 ರಿಂದ ಕೆಎಎಸ್ /ಪಿಎಸ್ ಐ ತರಬೇತಿ

ಆರ್ ಎಲ್ ಜಾಲಪ್ಪ ಅಕಾಡೆಮಿ 2019 ರ ಜುಲೈ 25 ರಿಂದ KAS/PSI ಹುದ್ದೆಗಳ ಆಯ್ಕೆಯ ಲಿಖಿತ ಪರೀಕ್ಷೆಗೆ ಹಿಂದುಳಿದ ವರ್ಗಗಳ ಪದವೀಧರ ಯುವಕ ಯುವತಿಯರಿಗೆ ನಾಲ್ಕು ತಿಂಗಳು ಉಚಿತ ತರಬೇತಿ ನೀಡಲಿದೆ.

ತರಬೇತಿ ಎಂದಿನಂತೆ ಸಂಪೂರ್ಣ ಉಚಿತವಾಗಿರುತ್ತದೆ.

ಸೋಲೂರಿನಲ್ಲಿ ತರಬೇತಿಗೆ 120 ಮಂದಿಗೆ ಮಾತ್ರ ಅವಕಾಶವಿದೆ.

ವಸತಿ, ಊಟ, ಗ್ರಂಥಾಲಯ ತಿಂಗಳಿಗೆ ರೂ. 5000 ರಂತೆ ( ಪ್ರವೇಶ ಶುಲ್ಕ ರೂ. 1000 ಮತ್ತು ಮಾದರಿ ಪರೀಕ್ಷೆಗೆ ರೂ. 1000 ಸೇರಿ ) ಒಟ್ಟು ರೂ. 22,000 ನಿಗದಿ ಪಡಿಸಲಾಗಿದೆ.(ಎರಡು ಕಂತುಗಳಲ್ಲಿ ಪಾವತಿ ಮಾಡಬಹುದು).

ಮೊದಲ ಕಂತು :Rs.15,000

ಎರಡನೇ ಕಂತು :Rs.7,000

(ಎರಡನೇ ಕಂತನ್ನು ದಾಖಲಾದ 30 ದಿನಗಳ ಒಳಗೆ ಪಾವತಿಸುವುದು)

ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ಇದೆ. www.rljacademy.com ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಜುಲೈ 20 ರ ಒಳಗೆ ಸಲ್ಲಿಸಬೇಕು. ಪ್ರವೇಶ ಪ್ರಕ್ರಿಯೆ ಜುಲೈ 1 ರಿಂದ ನಡೆಯಲಿದೆ. ತರಬೇತಿ ಜುಲೈ 25 ರಿಂದ ಆರಂಭವಾಗಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9900606042, 9449880693, 9731480759

Upcoming Academy Programmes :-

(Dates will be announced shortly)
1. PSI coaching - 4 months
2. Coaching for KPSC 'C' group - 4 months
3. Coaching for Panchayat Development Officer (P.D.O) - 2 months
4. Coaching for Bank officer and clerk ( Offline and Online) - 2 months
Note :- Interested candidates can register online, For clarifications call 9900606042

ಹಿಂದುಳಿದ ವರ್ಗಗಳ ಯುವಕ ಯುವತಿಯರಿಗೆ ಉದ್ಯೋಗ ಭರವಸೆಯ ಆಶಾಕಿರಣ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಐಎಎಸ್ ಪರೀಕ್ಷೆ

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಆರ್ಯ ಈಡಿಗ ಮಹಾಸಂಸ್ಥಾನವು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದೆ. ಅಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಭವನದಲ್ಲಿ ಆರ್.ಎಲ್.ಜಾಲಪ್ಪ ಅಕಾಡೆಮಿಯು ಹಿಂದುಳಿದ ವರ್ಗಗಳ ಯುವಕ ಯುವತಿಯರಿಗೆ ವೃತ್ತಿ ನೈಪುಣ್ಯ ಹೆಚ್ಚಿಸುವ ಅನೇಕ ತರಬೇತಿಗಳನ್ನು ನೀಡುತ್ತಿದೆ.

ಐಎಎಸ್, ಐಪಿಎಸ್, ಐಎಫ್‍ಎಸ್, ಐಆರ್‍ಎಸ್ ಇತ್ಯಾದಿ ಅಖಿಲ ಭಾರತ ನಾಗರಿಕ ಸೇವೆಯ ಅಧಿಕಾರಿಗಳನ್ನು ಕೇಂದ್ರ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಪ್ರತಿವರ್ಷ ಆಯ್ಕೆ ಮಾಡಿಕೊಳ್ಳುತ್ತಿದೆ. ಯಾವುದೇ ಪದವಿ ಪಡೆದವರು ಈ ಪರೀಕ್ಷೆ ತೆಗೆದುಕೊಳ್ಳಬಹುದು. ಅಕಾಡೆಮಿಯು ಈ ಹುದ್ದೆಗಳಿಗೆ ಆಗಸ್ಟ್ ತಿಂಗಳಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆಗೆ (ಪ್ರಿಲಿಮ್ಸ್) ಮತ್ತು ಅದರಲ್ಲಿ ಯಶಸ್ಸು ಪಡೆದವರಿಗೆ ಮುಖ್ಯ ಪರೀಕ್ಷೆ ಎದುರಿಸಲು ತರಬೇತಿ ನೀಡುತ್ತದೆ.

ಸತತ ಪರಿಶ್ರಮ ಅವಶ್ಯಕವಾಗಿರುವ ಈ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರಿಂದ ವಿಶೇಷ ಕೋಚಿಂಗ್ ಒದಗಿಸಲು ಅಕಾಡೆಮಿ ಸನ್ನದ್ಧವಾಗಿದೆ. ಆದ್ದರಿಂದ ಯಾವುದೇ ಪದವಿ ಪಡೆದಿದ್ದರೂ ಉನ್ನತ ಹುದ್ದೆಯನ್ನು ಪಡೆಯುವ ಗುರಿ ಇಟ್ಟುಕೊಂಡು ಕಠಿಣ ತಪಸ್ಸಿನಂತೆ ಅಧ್ಯಯನ ನಡೆಸಬಲ್ಲ ಯುವಕ ಯುವತಿಯರು ಈ ಅವಕಾಶವನ್ನು ಬಳಸಿಕೊಳ್ಳಿ. ನಿಮ್ಮ ಸ್ವಂತದ ವಿವರಗಳನ್ನು ಸಲ್ಲಿಸಿ. ಐಎಎಸ್ ಮತ್ತಿತರ ಅಖಿಲ ಭಾರತ ಸೇವೆಯ ಹುದ್ದೆಗಳಿಗೆ ಅವಶ್ಯಕವಿರುವಷ್ಟು ಕಾಲ ಕೋಚಿಂಗ್ ಸೌಲಭ್ಯವನ್ನು ಅಕಾಡೆಮಿಯು ಉಚಿತವಾಗಿ ನೀಡಲಿದೆ.

ಕೆಎಎಸ್

ರಾಜ್ಯ ಸರ್ಕಾರವು ಕಾಲಕಾಲಕ್ಕೆ ಗುಂಪುಗಳಲ್ಲಿ ನೇಮಕ ಮಾಡಿಕೊಳ್ಳುವ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಗೆ ನಡೆಸುವ ಕೆಎಎಸ್ ಪರೀಕ್ಷೆಯ ಪೂರ್ವಭಾವಿ ಅರ್ಹತಾ ಪರೀಕ್ಷೆ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಗೆ ತರಬೇತಿ ನೀಡುತ್ತಿದೆ.

ಎಫ್‍ಡಿಎ ಮತ್ತು ಎಸ್‍ಡಿಎ ಲಿಖಿತ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ಲೋಕಸೇವಾ ಆಯೋಗವು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಡೆಸಲಿರುವ ಲಿಖಿತ ಪರೀಕ್ಷೆಗೂ ಅಕಾಡೆಮಿಯು ತರಬೇತಿ ನೀಡಲಿದೆ.

ಗ್ರೂಪ್ "ಸಿ" ಮತ್ತು ಪಿಡಿಒ ಹುದ್ದೆಗಳು

ವಾಣಿಜ್ತ ತೆರಿಗೆ ನಿರೀಕ್ಷಕರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಗ್ರೂಪ್ ಸಿ ದರ್ಜೆಯಲ್ಲಿ ನೇಮಕ ಮಾಡಿಕೊಳ್ಳಲು ನಡೆಸುವ ಲಿಖಿತ ಪರೀಕ್ಷೆಗೂ ಅಕಾಡೆಮಿ ತರಬೇತಿ ನೀಡಲಿದೆ.

ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ತರಬೇತಿ

ಕರ್ನಾಟಕ ಸರ್ಕಾರ ಕಾಲಕಾಲಕ್ಕೆ ಕರೆಯುವ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳಿಗೆ ತರಬೇತಿ ಕೊಡಿಸಲಾಗುತ್ತದೆ. 168 ಸೆಂ.ಮೀ ಎತ್ತರ, 86 ಸೆಂ.ಮೀ ಎದೆಯ ಸುತ್ತಳತೆ ಇರುವ ಪುರುಷರು ಮತ್ತು 157 ಸೆಂಮೀ ಎತ್ತರ ಹಾಗೂ 45 ಕಿಲೋಗ್ರಾಂ ತೂಕ ಇರುವ ಯುವತಿಯರು ಈ ಹುದ್ದೆಗಳಿಗೆ ಆಯ್ಕೆಯಾಗಲು ಅರ್ಹರಿರುತ್ತಾರೆ. ದೈಹಿಕ ಪರೀಕ್ಷೆಯೂ ಆಯ್ಕೆ ಪರೀಕ್ಷೆಯಲ್ಲಿ ಇರುವುದರಿಂದ ಸೋಲೂರಿನಲ್ಲಿ ಇದಕ್ಕೂ ತರಬೇತಿಗೆ ವ್ಯವಸ್ಥೆ ಕಲ್ಪಿಸಲಾಗುವುದು.

ಬ್ಯಾಂಕಿಂಗ್ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ

ಸೋಲೂರಿನಲ್ಲಿ 24 ಗಂಟೆಗಳ ಕಂಪ್ಯೂಟರ್ ಲ್ಯಾಬ್ ಅನ್ನು ಸಜ್ಜುಗೊಳಿಸಲಾಗಿದೆ. ಇಂಟರ್ ನೆಟ್ ಮೂಲಕ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ನೀಡಲಾಗುತ್ತದೆ. 20-30 ವಯೋಮಿತಿಯ ಯಾವುದೇ ಪದವಿ ಪಡೆದಿರುವ ಆಸಕ್ತರು ಈ ತರಬೇತಿಯನ್ನು ಪಡೆದುಕೊಳ್ಳಬಹುದು. ಬ್ಯಾಂಕಿಂಗ್ ಪರೀಕ್ಷೆ ಇರುವ ಮಾದರಿಯಲ್ಲಿಯೇ ತರಬೇತಿಯೂ ಇರುವುದರಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಲ್ಲಿ ಪಡೆಯುವ ತರಬೇತಿ ಉಪಯೋಗಕ್ಕೆ ಬರುತ್ತದೆ.

ವೃತ್ತಿ ನೈಪುಣ್ಯತೆ ಹೆಚ್ಚಿಸುವ ತರಬೇತಿ

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ನೌಕರಿ ಪಡೆಯುವುದಕ್ಕೆ ಅವಶ್ಯಕವಾದ ಇಂಗ್ಲಿಷ್ ಸಂವಹನ ಸಾಮಥ್ರ್ಯ ಹೆಚ್ಚಳ, ಪತ್ರವ್ಯವಹಾರ ಕ್ಷಮತೆ, ಸವಾಲುಗಳನ್ನು ಎದುರಿಸುವ ಧೈರ್ಯ, ಮಾನಸಿಕ ಸ್ಥೈರ್ಯ ಹೆಚ್ಚಿಸುವ ಹಲವು ಬಗೆಯ ತರಬೇತಿಗಳನ್ನು ಅಕಾಡೆಮಿ ನೀಡಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವರೆಗೆ ಓದಿರುವ ಯುವಜನರಿಗೆ ಉದ್ಯೋಗದ ಅರ್ಹತೆ ಹೆಚ್ಚಿಸಿಕೊಳ್ಳಲು ಅಲ್ಪಾವಧಿಯ ತರಬೇತಿಯನ್ನು ಕೊಡಿಸಲಾಗುತ್ತದೆ. ಇದರಲ್ಲಿ ವ್ಯವಹಾರ ಜ್ಞಾನ, ಸಂವಹನ ಸಾಮಥ್ರ್ಯ, ಕಚೇರಿ ನಿರ್ವಹಣೆಯ ತರಬೇತಿಯನ್ನು ನುರಿತ ತಜ್ಞರಿಂದ ಕೊಡಿಸಲಾಗುತ್ತದೆ.
ಸೋಲೂರಿನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯಗಳಿವೆ. ತರಬೇತಿಗೆ ಆಯ್ಕೆಯಾದವರಿಗೆ ಅಕಾಡೆಮಿಯು ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಿದೆ.

ಈಡಿಗರು ಸೇರಿದಂತೆ ಹಿಂದುಳಿದ ವರ್ಗಗಳ ಯುವಕ ಯುವತಿಯರು ಈ ಸೌಲಭ್ಯಗಳನ್ನು ಬಳಸಿ ಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬುದು ಅಕಾಡೆಮಿಯ ಪೋಷಕರಾದ ಶ್ರೀ ಜಾಲಪ್ಪನವರ ಆಶಯವಾಗಿದೆ.

ಆದ್ದರಿಂದ ಈಗ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು, ಪದವಿ ಪಡೆದು ಉದ್ಯೋಗ ಪಡೆಯಲು ಪ್ರಯತ್ನ ನಡೆಸುತ್ತಿರುವವರು ತಮ್ಮ ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಸ್ವಂತ ವಿವರಗಳನ್ನು ಅಕಾಡೆಮಿಯ ಕಚೇರಿಗೆ ಕಳುಹಿಸಿ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಅಭ್ಯರ್ಥಿಗಳು ಹೆಸರು, ವಿಳಾಸ, ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ, ಇ ಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರ ಸಹಿತ ಅರ್ಜಿಗಳನ್ನು ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬೇಕು.

ಸಮಾಲೋಚನಾ (ಕೌನ್ಸೆಲಿಂಗ್ ) ಕೇಂದ್ರ:

ನಮ್ಮ ಸಮುದಾಯದ ಯುವಕ- ಯುವತಿಯರು ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿ ಅಕಾಡೆಮಿಯಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ಆದ್ದರಿಂದ ಈಡಿಗ ಜನಾಂಗದ ಆಸಕ್ತ ಯುವಕ- ಯುವತಿಯರು ತಮ್ಮ ಹೆಸರನ್ನು ಅಕಾಡೆಮಿಯಲ್ಲಿ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

ಅರ್ಜಿಗಳನ್ನು `ಕಾರ್ಯದರ್ಶಿ, ಆರ್.ಎಲ್.ಜಾಲಪ್ಪ ಅಕಾಡೆಮಿ (ರಿ). ಬ್ರಹ್ಮಶ್ರೀ ನಾರಾಯಣಗುರು ಭವನ, ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ 562127 ಇಲ್ಲಿಗೆ ಕಳುಹಿಸಬೇಕು.